ಓದುವಾಗ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ..?

ಓದುವಾಗ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ..?

How to Increase Concentration While Studying,

 ಏಕಾಗ್ರತೆ ಪರೀಕ್ಷೆ ಎಂಬ ಯುದ್ಧವನ್ನು ಎದುರಿಸಲು ಬೇಕಾಗುವ ಮುಖ್ಯ ಅಸ್ತ್ರವೆಂದರೆ ಓದುವಿಕೆಯ ಏಕಾಗ್ರತೆ. ಏಕಾಗ್ರತೆ ಎಂದರೇನು ? ನಾವು ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ಅಧ್ಯಯನ ಮಾಡಬೇಕು. ಅಧ್ಯಯನಕ್ಕೆ ಏಕಾಗ್ರತೆ ಅಗತ್ಯ. ಏಕಾಗ್ರತೆ ಎಂದರೆ ಒಂದು ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಎಂದರ್ಥ. ಈ ರೀತಿ ಏಕಾಗ್ರತೆಯಿಂದ ಓದಿದರೆ ಎಲ್ಲ ವಿಷಯಗಳು ಚಿರಕಾಲ ನೆನಪಿನಲ್ಲಿರುತ್ತವೆ. ಗಮನವಿಟ್ಟು ಓದುವುದು ಸ್ವಲ್ಪ ತ್ರಾಸದಾಯಕ ಕೆಲಸವೇ. ಏಕಾಗ್ರತೆ ಏಕಾಏಕಿ ಬರುವಂಥದ್ದಲ್ಲ. ಆರಂಭದಲ್ಲಿ ಒಂದು ನಿಮಿಷ ಏಕಾಗ್ರತೆಯಿಂದ ಓದಲು ಆರಂಭಿಸಬೇಕು. ಏಕಾಏಕಿ ಒಮ್ಮೆಲೇ ಅರ್ಧತಾಸು ಓದುವ ಏಕಾಗ್ರತೆಯನ್ನು ತಕ್ಷಣ ಬೆಳೆಸಿಕೊಳ್ಳುತ್ತೀರಿ ಎಂಬುದು ಅತಿಶಯೋಕ್ತಿ. ನೀವು ಸಹನೆ, ಸಂಯಮವನ್ನು ಕ್ರಮೇಣ ಹೆಚ್ಚಿಸಿಕೊಳ್ಳಬೇಕು. ನಿಮಗೆ ಅಶ್ಚರ್ಯಕರ ಫಲಿತಾಂಶಗಳು ಕಂಡುಬರಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಒಂದು ಸರಳವಾದ ತಂತ್ರವನ್ನು ಕಲಿತು, ಅದನ್ನು ಬಳಸಿದರೆ ಸಾಕು ಬಹಳ ಹೊತ್ತಿನವರೆಗೂ ಏಕಾಗ್ರತೆಯಿಂದ ಓದಬಲ್ಲಿರಿ. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
# ಕನಿಷ್ಠ ಮೂರು ಬಗೆಯ ಪಠ್ಯವನ್ನು ಆಯ್ಕೆ ಮಾಡಿಕೊಳ್ಳಿ.
# ಓದಲು ಆರಂಭಿಸಿ.
# ನಿಮ್ಮ ಮನಸ್ಸು-ಗಮನ ಜೀವನದ ಸಮಸ್ಯೆಗಳಿಂದ ಅಸ್ತವ್ಯಸ್ತವಾದರೆ, ಓದುವುದನ್ನು ತಕ್ಷಣ ನಿಲ್ಲಿಸಿಬಿಡಿ. ತೋಳಲಾಟದಿಂದ ಯಾವುದೂ ಗ್ರಹಿಕೆಗೆ ಲಭಿಸುವುದಿಲ್ಲ
# ತೊಂದರೆಗಳು ಮತ್ತು ಸಮಸ್ಯೆಗಳು ನಿಮ್ಮ ಚಿಂತೆಗೆ, ಚಿಂತನೆಗೆ ಕಾರಣವಾದರೆ ಅವುಗಳನ್ನು ಪ್ರಯತ್ನಪೂರ್ವಕವಾಗಿ ಬದಿಗೊತ್ತರಿಸಿ.
# ನಿಧಾನವಾಗಿ ಎರಡನೇ ಪಠ್ಯ ವಿಷಯಕ್ಕೆ ಬದಲಾಗಿ. ಈ ರೀತಿ ಪಠ್ಯ ವಿಷಯವನ್ನು ಬದಲಿಸಲು ಉದ್ದೇಶಿಸಿದಾಗ ಮೊದಲು ನೀವು ಆರಂಭಿಸಿದ ವಿಷಯಕ್ಕಿಂತ ಅತಿ ಸುಲಭವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಗಣಿತವಾದರೆ, ಮತ್ತೊಂದು ಲೆಕ್ಕ ಮಾಡಿ ಮುಗಿಸಿ. ಇತಿಹಾಸವಾದರೆ ಮತ್ತೊಂದು ಪುಟ ಓದಿ ಮುಗಿಸಿ. ನೀವೇನಾದರೂ ಭಾಷಾ ಪಠ್ಯ ವಿಷಯವ್ನು ಅಧ್ಯಯನ ಮಾಡುತ್ತಿದ್ದರೆ ಮತ್ತೊಂದು ಹೊಸ ಪಾಠವನ್ನು ಓದಿ ನಿಲ್ಲಿಸಿ. ಆ ಸ್ವಲ್ಪ ಹೊತ್ತು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿ. ಮತ್ತೊಂದು ಪುಟ ಓದಿದ ನಂತರ ವಿಶ್ರಾಂತಿ ಪಡೆಯಿರಿ.

# ಈ ವಿಧಾನವನ್ನು ಮತ್ತೆ ಮತ್ತೆ ಮಾಡುತ್ತೀರಿ. ಇದರ ಅಗತ್ಯ ಏನೆಂದರೆ ನೀವು ಮಾಡುವ ಕೆಲಸಗಳು ಇನ್ನಷ್ಟು ಬೇಗ ತ್ವರಿತವಾಗಿ ಮಾಡುತ್ತೀರಿ. ಕೊನೆಯದಾಗಿ ಮತ್ತೊಂದು ವಿಷಯ ಗಮನಿಸಿ ನಿಮ್ಮ ಕೆಲಸದಲ್ಲಿ ನಿಮಗೆ ಸಂಪೂರ್ಣ ಯಶಸ್ಸು ಕೈಗೂಡುತ್ತದೆ. ನಿಮ್ಮ ಏಕಾಗ್ರತೆ ಇನ್ನಷ್ಟು ಹೆಚ್ಚಾಗುತ್ತದೆ.
ಮೊದಲು ನೀವು ಕ್ಷಣಕಾಲ ಏಕಾಗ್ರತೆಯನ್ನು ಕಳೆದುಕೊಂಡರೆ ಮತ್ತೆ ಯಥಾಸ್ಥಿತಿಗೆ ಬರುವುದು ಕಷ್ಟವಾಗುತ್ತದೆ. ಮತ್ತೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಕಷ್ಟ. ನಿಮ್ಮ ಮನಸ್ಸು ಸ್ಥಿರವಾಗಿರುವುದಿಲ್ಲ. ಪರಿ ಪರಿ ವಿಧಗಳಲ್ಲಿ ಬದಲಾಗುತ್ತಿರುತ್ತದೆ. ಅದನ್ನು ನಿಯಂತ್ರಿಸಬೇಕು. ಮತ್ತೆ ನೀವು ಯಥಾಸ್ಥಿತಿಗೆ ಬರಬೇಕು.
ನಿಮ್ಮ ಏಕಾಗ್ರತೆಗೆ ಯಾವಾಗ ತಾತ್ಕಾಲಿಕ ವಿಘ್ನಗಳು ಉಂಟಾಗುತ್ತದೋ ಆಗ ತಕ್ಷಣವೇ ನೀವು ಆ ಕೆಲಸವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ. ನಂತರ ನಿಮ್ಮ ಮನೋಲಹರಿ ಬಂದಾಗ ಅದನ್ನು ಮುಂದುವರೆಸಬಹುದು. ಅದೇ ಮೊದಲನೇ ಕೆಲಸವನ್ನು ನಿಲ್ಲಿಸಲು ಒಳ್ಳೆಯ ಸಮಯ. ಏಕಾಗ್ರತೆಯಿಂದ ಮುಂದುವರೆಸಿದ ಕೆಲಸವನ್ನು ಮತ್ತೆ ಏಕಾಗ್ರತೆಯಿಂದ ಮುಂದುವರೆಸುತ್ತೀರಿ. ಸೋಲುಗಳ ಆಲೋಚನೆಯಿಂದಾಗಿ ನಿಲ್ಲಿಸಿಬಿಟ್ಟರೆ ಹತಾಶೆ ಹೆಚ್ಚಾಗುತ್ತದೆ. ನೀವು ಮಾಡುವ ಕೆಲಸ ಸಕಾರಾತ್ಮಕವಾಗಿ ಮುಗಿಸಿದರೆ ಮತ್ತೆ ಮುಂದುವರೆಸಿದಾಗ ಸಕಾರಾತ್ಮಕವಾಗಿಯೇ ಮುಂದುವರೆಸಬಹುದು.
ನೀವೊಂದು ಪಠ್ಯ ವಿಷಯದ ಜೊತೆಗೆ ಮತ್ತೊಂದು ಪಠ್ಯವನ್ನು ಓದಲು ಆರಂಭಿಸಬೇಕು. ಆಗ ನಿಮಗೆ ಎರಡರಲ್ಲೂ ನೈಪುಣ್ಯ ಲಭಿಸುತ್ತದೆ. ನೀವು ಈ ವಿಧಾನವನ್ನು ಒಂದು ತಿಂಗಳ ಕಾಲ ಪ್ರಯತ್ನಿಸಿ ನೋಡಿ-ಆಶ್ಚರ್ಯಕರ ಫಲಿತಾಂಶಗಳು ಗೋಚರಿಸುತ್ತವೆ. ನಿಮ್ಮ ಏಕಾಗ್ರತೆ ತಾನಾಗೇ ಹೆಚ್ಚಾಗುತ್ತದೆ. ನಿಮಗೆ ಒಳ್ಳೆಯದಾಗಲಿ.

Post a Comment

1 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)