ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೇ ಎನ್ನುವವರು ದಯವಿಟ್ಟು ಓದ

*ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೇ* ಎನ್ನುವವರು ದಯವಿಟ್ಟು ಓದಿ.
ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು.

ಒಂದು ಯುದ್ಧದಿಂದಾಗಿ  *ತಿಮ್ಮಪ್ಪ ನಾಯಕ ಕನಕದಾಸ* ನಾಗಿ ಬದಲಾದ.

*ನಾರದ* ನ  ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ   *ವಾಲ್ಮೀಕಿ* ಯಾದ.

ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ
*ಬಸವಣ್ಣ ಜಗಜ್ಯೋತಿ* ಯಾದ.

ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ *ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ* ಯಾದ.

ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ *ನರೇಂದ್ರ ವಿವೇಕಾನಂದ* ನಾದ.

ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ *ಸೂಪರ್ ಸ್ಟಾರ್ ಉಪೇಂದ್ರ* ನಾದ.

ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ *ರವಿ ಡಿ ಚನ್ನಣ್ಣನವರ್* ಇಂದು ಐಪಿಎಸ್ ಅಧಿಕಾರಿಯಾದ.

ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ *ಎಸ್.ಆರ್.ಕಂಠಿ* ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ *"ಭರತ"* ನಾದ.

ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ,  ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ *ಅಣ್ಣಾ ಹಜಾರೆ ಆಧುನಿಕ ಗಾಂಧಿ* ಯಾದರು.

ಬೀದಿ ದೀಪದಲ್ಲಿ ಓದಿದ *ವಿಶ್ವೇಶ್ವರಯ್ಯ ಭಾರತ ರತ್ನ* ನಾದ.

ಎಂಟನೇ ತರಗತಿ ಫೇಲ್ ಆದ *ಸಚಿನ್* ಇಂದು ಕ್ರಿಕೆಟ್ ಲೋಕದ ದೇವರಾದ.

ಪೆಟ್ರೋಲ್ ಹಾಕುತ್ತಿದ್ದ *ಅಂಬಾನಿ* ಇಂದು ಭಾರತದ *ನಂಬರ್ ಒನ್* ಶ್ರೀಮಂತನಾದ.

*ಗೋಪಾಲ್ ಕೃಷ್ಣ ರೋಲಂಕಿ* ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
ಹಿಂದಿ ಬರದಿದ್ದರೂ *ಐಎಎಸ್* ಪರೀಕ್ಷೆಯಲ್ಲಿ ಮೂರನೇ Rank ಬಂದ.

ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ *ಅಬ್ರಹಾಂ ಲಿಂಕನ್* ಸತತ ಸೋಲು ಕಂಡರು ಕೊನೆಗೆ *ಅಮೆರಿಕದ ಅಧ್ಯಕ್ಷ* ನಾದ.

*ಎನ್. ಅಂಬಿಕಾ* ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ *ಐಪಿಎಸ್* ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ *ಮಿಸ್* ಮಾಡದೆ ತಿಳಿದುಕೊಳ್ಳಿ).

ನಮ್ಮ ಜಿಲ್ಲೆಯವನೊಬ್ಬ
*ಐಎಎಸ್* ಅಧಿಕಾರಿಯಾದ.
ನಮ್ಮ ತಾಲೂಕಿನವನೊಬ್ಬ
*ಕೆ.ಎ.ಎಸ್* ಅಧಿಕಾರಿಯಾದ.
ನಮ್ಮ ಊರಿನವನೊಬ್ಬ
*ಪಿ.ಎಸ್.ಐ.* ಆದ.
ನಮ್ಮ ಓಣಿಯವನೊಬ್ಬ
*ಎಫ್.ಡಿ.ಎ.* ಆದ.
ನಮ್ಮ ಮನೆಯ ಪಕ್ಕದವನೊಬ್ಬ
*ಎಸ್.ಡಿ.ಎ* ಆದ.

ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...? ಏಕೆಂದರೆ ನಮ್ಮಲ್ಲಿ *ಸಾಧಿಸುವ ಛಲವೇ ಸತ್ತು* ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.

*ಕಷ್ಟ ಯಾರಿಗಿಲ್ಲಾ...?*
*ಅವಮಾನ ಯಾರಿಗಾಗಿಲ್ಲ...??*
*ಸೋಲನ್ನ ಯಾರು ನೋಡಿಲ್ಲ...??*

*ಕಷ್ಟ* ಗಳನ್ನ ಮನುಷ್ಯ *ಮೌನ* ವಾಗಿ ದಾಟಬೇಕು.
*ಪರಿಶ್ರಮ* ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ *ಯಶಸ್ಸಿನ ಫಲ* ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ *ಪುಸ್ತಕ* ಎಂದಿಗೂ ಮಾಡಲಾರದು.

*ಎದೆಗೆ ಬಿದ್ದ ಅಕ್ಷರ..*
*ಭೂಮಿಗೆ ಬಿದ್ದ ಬೀಜ..* ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.

*ಪುಸ್ತಕ* ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.

*ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆ* ಯೊಂದಿದ್ದರೆ ಏನನ್ನಾದರೂ ಸಾದಿಸಬಹುದು.

ಇಂತಹ *ಸಂದೇಶಗಳು* ಹಲವರಿಗೆ *ಸ್ಫೂರ್ತಿ* ಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ.
*ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.*

ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು  *ಗಾರ್ಲ ವರ್ದಿ* ರವರು ಹೇಳುತ್ತಾರೆ.

ಯೋಚಿಸಿ ನಿರ್ಧರಿಸಿ.
ಯಾಕಂದ್ರೆ *ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ*.

Post a Comment

7 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)