ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

ನಾವು ನಮ್ಮ ಬುದ್ಧ ಶಕ್ತಿಯನ್ನು ಉಪಯೋಗಿಸುವ ಬದಲು ಕಂಪ್ಯೂಟರ್ ಮತ್ತು ಫೋನ್ ಬಳಸಿ ಕೆಲಸ ಮಾಡುವುದು ಜಾಸ್ತಿಯಾಗುತ್ತಿದೆ. ಯಾವುದಾದರು ವಸ್ತುಗಳ ಬಗ್ಗೆ ತಿಳಿಯಲು ತಕ್ಷಣ ಗೂಗಲ್ ಸರ್ಚ್ , ಸಣ್ಣ ಪುಟ್ಟ ಲೆಕ್ಕಚಾರಕ್ಕೆ ಫೋನ್ ಬಳಸುತ್ತೇವೆ. ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು


ಫೋನ್ ನಲ್ಲಿ 1000 ನಂಬರ್ ಇರುತ್ತದೆ. ಆದರೆ ನಮಗೆ ಬೇಕಾದವರ ನಂಬರ್ ಕೂಡ ನೆನಪಿರುವದಿಲ್ಲ, ಕೆಲವರಿಗಂತೂ ಸ್ವಂತ ನಂಬರ್ ಕೂಡ ತಿಳಿದಿರುವುದಿಲ್ಲ. ಏಕೆ ಹೀಗಾಗುತ್ತಿದೆ ಮೆದುಳಿನ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ? ಖಂಡಿತ ಅಲ್ಲ ನಾವು ನಮ್ಮ ಬುದ್ಧಿ ಶಕ್ತಿ ಉಪಯೋಗಿಸದೆ ಅದು ಜಡವಾಗಿ ಬಿಟ್ಟಿರುತ್ತದೆ. ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು
ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಕೆಳಗಿನ ಸರಳ ಸಲಹೆ ಪಾಲಿಸಿ.

ನನ್ನ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ ಎಂದು ನಿಮ್ಮಷ್ಟಕ್ಕೆ ನೀವೆ ಹೇಳಿಕೊಳ್ಳಿ
ಕೆಲವರು ಹೇಳುವುದನ್ನು ಕೇಳಿರಬಹುದು 'ನನಗೆ ಪರಿಚಯದವರ ಹೆಸರು ತಕ್ಷಣ ಜ್ಞಾಪಕಕ್ಕೇ ಬರುವುದಿಲ್ಲ, ವಸ್ತುಗಳನ್ನು ಎಲ್ಲಿ ಇಟ್ಟಿರುತ್ತೇನೆ ಎಂದು ನೆನಪಿಗೆ ಬರುವುದಿಲ್ಲ' . ಒಂದು ವೇಳೆ ನಿಮಗೂ ಆ ರೀತಿಯ ಭಾವನೆಯಿದ್ದರೆ ಅದನ್ನು ತಲೆಯಿಂದ ತೆಗೆದು ಹಾಕಿ. 'ನನಗೆ ನೆನಪಿನ ಶಕ್ತಿ ಚೆನ್ನಾಗಿದೆ' ಎಂದು ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ನೆನಪಿನಲ್ಲಿ ಇಟ್ಟುಕೊಳ್ಳ ಬೇಕಾದ ವಸ್ತವನ್ನು ಪದೇ ಪದೇ ನೆನಪಿಸಿ ಕೊಳ್ಳಿ.
 

ಕ್ಯಾಲ್ಕುಲೇಟರ್ ಅಥವಾ ಫೋನ್ ಅನ್ನು ದೂರವಿರಿಸಿ!
ಪ್ರತಿಯೊಂದು ವಿಷಯಕ್ಕೂ ಕ್ಯಾಲ್ಕುಲೇಟರ್ ಅಥವಾ ಫೋನ್ ಅವಲಂಭಿಸುವ ಬದಲು ಬುದ್ಧಿ ಉಪಯೋಗಿಸಿದರೆ ಮೆದುಳು ಚುರುಕಾಗುವುದು. ಚಿಕ್ಕ ಪುಟ್ಟ ಲೆಕ್ಕಚಾರವನ್ನು ಯಾವುದೇ ಉಪಕರಣಗಳ ಸಹಾಯಪಡೆಯದೆ ನೀವೆ ಯೋಚಿಸಿ ಮಾಡಿ. ಈಗೆಲ್ಲಾ ನಾವು 10+10 ಎಷ್ಟೆಂದು ಕೇಳಿದರೆ ಕ್ಯಾಲ್ಕುಲೇಟರ್ ಅಥವಾ ಫೋನಿನಲ್ಲಿ ಲೆಕ್ಕ ಮಾಡಿ ಹೇಳುವಷ್ಟು ಸೋಮಾರಿಗಳಾಗಿದ್ದೇವೆ. ಆದಷ್ಟು ಬುದ್ಧಿ ಶಕ್ತಿ ಉಪಯೋಗಿಸಬೇಕು. ಆಗ ಜ್ಞಾಪಕ ಶಕ್ತಿ ಕೂಡ ಹೆಚ್ಚಾಗುತ್ತದೆ.

 

ಲಿಸ್ಟ್ ಮಾಡಿಕೊಳ್ಳಿ
ಶಾಪಿಂಗ್ ಹೋಗುವಾಗ ಯಾವ ವಸ್ತುಗಳು ಬೇಕೊ ಅದನ್ನು ಲಿಸ್ಟ್ ಮಾಡಿ ಹೋಗಬೇಕು ನಂತರ ಲಿಸ್ಟ್ ನೋಡದೆ ಏನೆಲ್ಲಾ ವಸ್ತುಗಳು ಬೇಕೆಂದು ಜ್ಞಾಪಿಸಿಕೊಂಡು ಕೊಳ್ಳಬೇಕು. ಕೆಲವೊಂದು ವಸ್ತುಗಳು ನೆನಪಿಗೆ ಬಾರದೇ ಹೋದರೆ ಮಾತ್ರ ಲಿಸ್ಟ್ ನೋಡಬೇಕು.
 

ಕ್ಯಾಮೊಮೈಲ್ ಚಹಾ ಸೇವಿಸಿ
ಕ್ಯಾಮೊಮೈಲ್ ಎಂಬುದು ಒಂದು ಹೂವಿನ ಜಾತಿಯ ಸಸ್ಯವಾಗಿದ್ದು, ಇದರಲ್ಲಿರುವ ಆಪಿಜೆನಿನ್ ಎಂಬ ಸತ್ವವು ಮೆದುಳಿನ ಜೀವಕೋಶಗಳನ್ನು ಒಂದಕ್ಕೊಂದು ಸೇರುವಂತೆ ಮಾಡಿ ನ್ಯೂರೋನಲ್ ಸೆಲ್ಸ್ ನ ವರ್ಗದ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದರಿಂದ ಈ ಚಹಾ ಸೇವನೆ ಮಾಡಿದರೆ ನೆನಪಿನ ಶಕ್ತಿಯು ಅಧಿಕಗೊಂಡು ಓದುವ ಅಭ್ಯಾಸವು ಹೆಚ್ಚುತ್ತದೆ. ಇದರ ಪೂರ್ಣ ಪ್ರತಿಫಲ ಹೊಂದಲು ಪ್ರತಿದಿನ ಎರಡು ಬಾರಿ ಈ ಚಹಾ ಆನ್ನು ಸೇವಿಸಿ ನೋಡಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.
 

ಹಸಿರು ಎಲೆಯುಕ್ತ ತರಕಾರಿಗಳನ್ನು ಸೇವಿಸಿ
ಅಮೇರಿಕಾದ ಸಂಶೋಧಕರು ಹೇಳುವ ಪ್ರಕಾರ ಬಸಲೆ, ಕೋಸಿನ ಬಗೆಯ ತರಕಾರಿಗಳು ಮತ್ತು ಕೊಲ್ಲಾರ್ಡ್ಸ್ ನಂತಹ ತರಕಾರಿಗಳನ್ನು ನಿಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ. ಈ ರೀತಿಯ ಹಸಿರು ಎಲೆಯುಕ್ತ ತರಕಾರಿಗಳನ್ನು ಹೆಚ್ಚು ಸೇವಿಸಿದರೆ ಬುದ್ಧಿಮಾಂಧ್ಯತೆಯಿಂದ ದೂರವಿರಬಹುದು

Post a Comment

0 Comments