ಬೋರಿಂಗ್ ವಿಷಯವ‌ನ್ನು ಇಂಟರೆಸ್ಟಿಂಗ್ ಆಗಿಸೋದು ಹೇಗೆ?

ಬೋರಿಂಗ್ ವಿಷಯವ‌ನ್ನು ಇಂಟರೆಸ್ಟಿಂಗ್ ಆಗಿಸೋದು ಹೇಗೆ?

ಪ್ರತಿಯೊಬ್ಬರಿಗೂ ಕಾಲೇಜ್‌ ದಿನಗಳಲ್ಲಿ ಬೋರಿಂಗ್ ಸಬ್‌ಜೆಕ್ಟ್‌ ಅನ್ನೋದು ಇದ್ದೇ ಇರುತ್ತದೆ. ಆ ವಿಷ್ಯದ ಬಗ್ಗೆ ಆಸಕ್ತಿಯೇ ಇರೋದಿಲ್ಲ. ಕ್ಲಾಸ್‌ಗೆ ಹೋಗೋದೆ ಬೇಡ ಅನಿಸುತ್ತೆ. ನಿಮಗೂ ಕೂಡಾ ಬೋರಿಂಗ್ ಸಬ್‌ಜೆಕ್ಟ್ ಇದ್ದಿರಬಹುದು. ಹಾಗಂತ ಅದನ್ನು ಬಿಟ್ಟುಬಿಡೋ ಹಾಗಿಲ್ಲ. ಓದಲೇ ಬೇಕು. ಮಾರ್ಕ್ಸ್ ಗಳಿಸಲೇ ಬೇಕು.

ಬೋರಿಂಗ್ ಸಬ್‌ಜೆಕ್ಟ್ ಇದ್ದ ಹಾಗೇ ಇಂಟರೆಸ್ಟಿಂಗ್ ಸಬ್‌ಜೆಕ್ಟ್ ಕೂಡಾ ಇರುತ್ತದೆ. ಯಾವುದೇ ಒಂದು ವಿಷ್ಯದಲ್ಲಿ ನಿಮಗೆ ಆಸಕ್ತಿ ಇಲ್ಲದೇ ಇರಲು ಅದಕ್ಕೆ ಕೆಲವು ಬಲವಾದ ಕಾರಣಗಳೂ ಇರಬಹುದು. ನಿಮಗೆ ಬೋರಿಂಗ್ ಅನಿಸುವ ಸಬ್‌ಜೆಕ್ಟ್‌ನ್ನು ಆಸಕ್ತಿದಾಯಕವಾಗಿಸಲು ಇಲ್ಲದೆ ಕೆಲವು ಟಿಪ್ಸ್....

1. ಹಾಸ್ಯ ಸೇರಿಸಿ
ನಾವು ಶಾಲಾ ದಿನಗಳಲ್ಲಿ ಕಲಿತ ಗಣಿತದ ಸೂತ್ರಗಳು ಹಾಗೂ ವಿಜ್ಞಾನದ ಫಾರ್ಮುಲಾಗಳು ನಮಗೆ ನೆನಪಿನಲ್ಲಿ ಉಳಿಯದೇ ಇರಬಹುದು. ಆದರೆ ಶಾಲಾ ದಿನಗಳಲ್ಲಿ ಸ್ನೇಹಿತರ ಜೊತೆ ಮಾಡಿರುವ ತಮಾಷೆಗಳು ಖಂಡಿತಾ ನೆನಪಿರುತ್ತದೆ. ಈಗೀನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವಿಷಯವೂ ಬಹಳಷ್ಟು ವಿಧಾನಗಳಲ್ಲಿ ದೊರೆಯುತ್ತದೆ. ಯಾವುದೇ ಆಸಕ್ತಿದಾಯಕವಲ್ಲದ ವಿಷಯವನ್ನು ತಮಾಷೆಯಾಗಿ ಬಿಂಬಿಸಬೇಕು. ಇದರಿಂದ ಅ ವಿಷಯ ನಿಮಗೆ ಸುಲಭವಾಗಿ ನೆನಪಿನಲ್ಲಿರುತ್ತದೆ.
  

2. ವಿಭಿನ್ನ ದೃಷ್ಠಿಕೋನವನ್ನು ಇಟ್ಟುಕೊಳ್ಳಿ
ನಾವು ನೋಡುವ ದೃಷ್ಠಿಕೋನವೇ ತಪ್ಪಾಗಿರುವುದರಿಂದ ಆ ವಿಷ್ಯದ ಸೌಂದರ್ಯವನ್ನು ನಾವು ಕಳೆದುಕೊಳ್ಳುತ್ತೇವೆ, ಸೌಂದರ್ಯವನ್ನೆವುದು ನೋಡುಗರ ನೋಟದಲ್ಲಿದೆ ಅನ್ನೋದು ನಿಜ, ಹಾಗಿರುವಾಗ ನಮ್ಮ ದೃಷ್ಠಿಕೋನವನ್ನೇ ಏಕೆ ಬದಲಾಯಿಸಬಾರದು.

  

3. ಅದ್ಭುತವಾಗಿಸಿ
ಕಾದಂಬರಿ ಓದೋದಕ್ಕಿಂತ ಕಾಮಿಕ್ ಪುಸ್ತಕವನ್ನು ಓದೋದು ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಯಾಕೆಂದರೆ ಯಾವುದೆಲ್ಲಾ ನಮಗೆ ಸಂತೋಷವನ್ನು ನೀಡುತ್ತದೆ. ಅದು ನಮ್ಮ ಮನಸ್ಸಿನಲ್ಲಿ ಬೇಗನೇ ಫಿಕ್ಸ್ ಆಗುತ್ತದೆ. ಗ್ರಾಫಿಕ್ಸ್ ಆಗಿರಬಹುದು. ಫೋಟೋಗಳಾಗಿರಬಹುದು ವಿಷಯವನ್ನು ಖುಷಿ ನೀಡುವಂತಹ ರೀತಿಯಲ್ಲಿ ವ್ಯಕ್ತಪಡಿಸುವಂತಿದ್ದರೆ ನೀವು ಅದನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ.
  

4. ಪ್ರಶ್ನಾವಳಿಗಳನ್ನು ರಚಿಸಿ
ಮುಖ್ಯ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿ. ಅದಕ್ಕೆ ಉತ್ತರಗಳನ್ನು ಕಂಡುಹಿಡಿಯಿರಿ. ಚಿಕ್ಕದಾಗಿ ಚೊಕ್ಕದಾದ ಉತ್ತರ ರಚಿಸಿ. ಹೀಗೆ ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ ಅದಕ್ಕೆ ಉತ್ತರವನ್ನೂ ಕಂಡುಕೊಳ್ಳಲು ಪ್ರಯತ್ನಿಸುತ್ತೀರಾ. ಇದು ಮುಂದೆಯೂ ಸಹಾಯವಾಗುತ್ತದೆ.
  

5. ಕೇಸ್‌ ಸ್ಟಡಿ
ಇತರ ಬೋರಿಂಗ್ ವಿಧಾನಗಳನ್ನು ಅನುಸರಿಸುವ ಬದಲು ಕೇಸ್‌ ಸ್ಟಡಿ ಮಾಡಿ. ಹೊರಗಿನ ಪ್ರಪಂಚದಲ್ಲಿ ವಿಷ್ಯವನ್ನು ಹೇಗೆ ಅಳವಡಿಸ ಬಹುದು ಎನ್ನುವುದು ಕೇಸ್‌ ಸ್ಟಡಿಯಿಂದ ತಿಳಿಯುತ್ತದೆ. ಪುಸ್ತಕ ಓದಿದರೂ ಸಿಗದಂತಹ ಮಾಹಿತಿಯನ್ನು ಕೇಸ್‌ ಸ್ಟಡಿ ನೀಡುತ್ತದೆ. ಇದು ನಿಮ್ಮನ್ನು ಚಾಲೆಂಜಿಂಗ್‌ನ್ನಾಗಿಸುತ್ತದೆ ಜೊತೆಗೆ ಇವುಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನೂ ತಿಳಿಸುತ್ತದೆ.

Post a Comment

0 Comments