ಫಸ್ಟ್ ಜಾಬ್... ನಿಮ್ಮ ತಯಾರಿ ಹೀಗಿರಲಿ!

ಫಸ್ಟ್ ಜಾಬ್... ನಿಮ್ಮ ತಯಾರಿ ಹೀಗಿರಲಿ!

Published:Monday, June 4, 2018, 15:59 [IST]
ಮೊದಲ ಉದ್ಯೋಗ ಯಾವಾಗಲೂ ತುಂಬಾ ನಿರೀಕ್ಷೆ, ಕುತೂಹಲದಿಂದ ಕೂಡಿರುತ್ತದೆ. ಮೊದಲ ದಿನ ಬೆಸ್ಟ ವರ್ಕ್ ನೀಡಬೇಕೆಂದು ನಾವು ನಿರ್ಧಾರ ಮಾಡಿರುತ್ತೇವೆ. ಇನ್ನು ಕೆಲವರು ಮೊದಲ ದಿನದ ಜಾಬ್ ಗೆ ಹೋಗುವ ವೇಳೆ ಸಖತ್ ತಯಾರಿ ಕೂಡಾ ಮಾಡಿರುತ್ತಾರೆ. ಜಾಬ್ ಗೆ ಹೋಗುವ ಮುನ್ನ ನಾವು ತುಂಬಾ ಎಕ್ಸೈಟ್ಮೆಂಟ್ ಕೂಡಾ ಆಗಿರುತ್ತೇವೆ. ಹಾಗಾಗಿ ಮೊದಲಿಗೆ ನಾವು ತಯಾರಾಗಿರಬೇಕು.


powered by Rubicon Project
ನಿಮ್ಮ ಮೊದಲ ಜಾಬ್ ಗೆ ಹೋಗುವ ಮುನ್ನ ನಿಮ್ಮ ತಯಾರಿ ಹೀಗಿರಲಿ:
ನಿಮ್ಮ ಜಾಬ್ ಪ್ರೊಫೈಲ್ ಬಗ್ಗೆ ಸ್ಟಡಿ ಮಾಡಿರಿ:
ಸ್ಟಡಿ ಮಾಡಿ ಅಂದ್ರೆ ಇನ್ನ ಅದಕ್ಕಾಗಿ ಕಾಲೇಜು ಬುಕ್‌ಗಳನ್ನ ಮತ್ತೆ ತೆರೆಯಬೇಡಿ. ನೀವು ಹೋಗುವ ಜಾಬ್ ಬಗ್ಗೆ ಜಸ್ಟ್ ಗೂಗಲ್ ನಲ್ಲಿ ಸರ್ಚ್ ಮಾಡಿ. ಜಾಬ್ ಬಗ್ಗೆ ಮಾಹಿತಿ ನೀಡಲು ತುಂಬಾ ಸೈಟ್ ಗಳು ತೆರೆಯಬಹುದು. ಅವೆಲ್ಲವನ್ನ ಮೇಲಿಂದ ಮೇಲಕ್ಕೆ ಓದಿ ಮೈಂಡ್‌ನಲ್ಲೇ ಎಲ್ಲಾ ನೋಟ್ ಮಾಡಿಕೊಳ್ಳಿ. ಇದರಿಂದ ನೀವು ಜಾಬ್ ಗೆ ಸೇರಿದ ಕೂಡಲೇ ಯಾರಾದ್ರೂ ಏನು ಮಾಡುತ್ತಿಯಾ ಎಂದು ಕೇಳಿದ್ರೆ ಥಟ್ಟನೆ ನೀವು ಉತ್ತರಿಸಬಹುದು.

ಅದೇ ಫೀಲ್ಡ್‌ನ ಉದ್ಯೋಗಿಗಳ ಜತೆ ಚರ್ಚೆ:
ಇದು ಬೆಸ್ಟ್ ವಿಧಾನ. ಯಾಕೆಂದ್ರೆ ಇವರಿಗೆ ಜಾಬ್ ಬಗ್ಗೆ ಎಲ್ಲಾ ತಿಳಿದಿರುತ್ತದೆ. ಜಾಬ್ ಚಾಲೇಂಜಸ್, ಕಷ್ಟಗಳು, ಟಾರ್ಗೆಟ್, ಡೆಡ್ ಲೈನ್ ಮುಂತಾದ ಬಗ್ಗೆ ಈಗಾಗಲೇ ಅದೇ ಫೀಲ್ಡ್‌ನಲ್ಲಿ ಕೆಲಸ ಮಾಡುವವರಿಗೆ ಮಾತ್ರ ಗೊತ್ತಿರಲು ಸಾಧ್ಯ. ಹಾಗಾಗಿ ಅವರ ಬಳಿ ಈ ಬಗ್ಗೆ ಚರ್ಚಿಸಿ. ಅವರು ಮಾತ್ರ ನಿಮಗೆ ಜಾಬ್ ಬಗ್ಗೆ ಮಾಹಿತಿಯನ್ನ ಪ್ರ್ಯಾಕ್ಟಿಕಲ್ ಆಗಿ ತಿಳಿಸಲು ಸಾಧ್ಯ
ಇತರ ಉದ್ಯೋಗಿಗಳ ಮೊದಲ ದಿನದ ಜಾಬ್ ಅನುಭವ ಕೇಳಿ:
ಈಗಾಗಲೇ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಅನುಭವ ಕೇಳಿ. ಹೇಗೆ ಇಲ್ಲಿಯ ವರ್ಕ್ ಮಾಡುವ ಅನುಭವ, ವರ್ಕ್ ಹೇಗೆ ಇರುತ್ತದೆ, ನೀವು ಅಂದುಕೊಂಡಂತೆ ನಿಮ್ಮ ಫಸ್ಟ್ ಜಾಬ್ ಇದೆಯಾ, ನೀವು ಈ ಜಾಬ್ ನಿಂದ ಖುಷಿಯಾಗಿದ್ದೀರಾ , ಮೊದಲ ಬಾರಿಗೆ ಬಂದಾಗ ಏನೆಲ್ಲಾ ಪ್ರಿಪೇರ್ ಮಾಡಿಕೊಂಡು ಬಂದಿದ್ರಿ ಎಂದು ಕೇಳಿ.
ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ:
ಕಾಲೇಜಿನಲ್ಲಿ ಏನು ಕಲಿತಿದ್ದೀರಿ ಅದು ಇಲ್ಲಿ ಬಳಕೆ ಆಗಲ್ಲ. ಪುಸ್ತಕದಲ್ಲಿ ಓದಿದನ್ನ ಇಲ್ಲಿ ಬಳಸೋ ಬದಲು, ಕೆಲಸದ ಬಗ್ಗೆ ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ, ಅರ್ಥ ಮಾಡಿಕೊಳ್ಳಿ.

ಸ್ಟ್ರೆಸ್ ಇಲ್ಲದೇ ಕೆಲಸ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ:
ಮೊದಲ ಜಾಬ್ ಅಂದ್ರೆ ಜನರು ತುಂಬಾ ಸ್ಟ್ರೆಸ್ ಗೆ ಒಳಗಾಗಿರುತ್ತಾರೆ. ಯಾಕೆಂದ್ರೆ ಸರಿಯಾದ ತಯಾರಿ ಮಾಡಿಕೊಂಡಿರುವುದಿಲ್ಲ ಅದಕ್ಕೆ. ನಿಮ್ಮ ವರ್ಕ್ ಪರಿಸ್ಥಿತಿ ಹೇಗಿರುತ್ತದೆ ಎಂಬುವುದು ದೊಡ್ಡ ವಿಷಯವೇ ಅಲ್ಲ. ಹಾಗಾಗಿ ಸ್ಟ್ರೆಸ್ ಇಲ್ಲದೇ ಹೇಗೆ ಕೆಲಸ ಮಾಡಬಹುದು ಎಂದು ತಿಳಿದುಕೊಂಡು, ಬಳಿಕ ಕೂಲ್ ಆಗಿ ಪರ್ಫೋಮೆನ್ಸ್ ನೀಡಿ.

Post a Comment

0 Comments