ಐಎಎಸ್ ಮಾಡುವ ಆಸೆಗೆ ದಾರಿಯೇನು?

ಐಎಎಸ್ ಮಾಡುವ ಆಸೆಗೆ ದಾರಿಯೇನು?
======================
1. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಐಎಎಸ್‌ ಮತ್ತು ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕೆಂಬ ಆಸೆ ಇದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಏನು ಮಾಡಬೇಕು? ಅದರ ಬಗ್ಗೆ ಮಾಹಿತಿಗಳು ಯಾವ ಪತ್ರಿಕೆ ಹಾಗೂ ಮ್ಯಾಗಜಿನ್‌ನಲ್ಲಿ ದೊರಕುತ್ತದೆ? ಆ ಪರೀಕ್ಷೆಯನ್ನು ಎದುರಿಸಲು ಯಾವ ಪುಸ್ತಕಗಳನ್ನು ಓದಬೇಕು ತಿಳಿಸಿ.
============
*ಸಿವಿಲ್ ಸರ್ವಿಸ್‌ ಪರೀಕ್ಷೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್‌ ಕಮೀಷನ್ (UPSC) ಇವರು, ಐಎಎಸ್ (IAS), ಐಪಿಎಸ್ (IPS), ಐಎಫ್‌ಎಸ್(IFS) ಹುದ್ದೆಗಳನ್ನು ತುಂಬಲು ಈ ಪರೀಕ್ಷೆಯನ್ನು ಆಲ್ ಇಂಡಿಯಾ ಮಟ್ಟದಲ್ಲಿ ನಡೆಸುತ್ತಾರೆ.*
==========
*ಈ ಪರೀಕ್ಷೆ ಮೂರು ಹಂತದಲ್ಲಿ ನಡೆಯುತ್ತದೆ.*
===========
*1. ಪ್ರಿಲಿಮಿನರಿ ಪರೀಕ್ಷೆ (Preliminary Exam),*
*2. ಮೈನ್ ಪರೀಕ್ಷೆ (Main exam for those who pass preliminary)*
*3. ಪ್ರಿಲಿಮಿನರಿ ಪರೀಕ್ಷೆ ಪಾಸ್ ಆದರೆ, ಮೈನ್ ಪರೀಕ್ಷೆಯನ್ನು ಬರೆಯಬಹುದು.*
========
*3. ಪರ್ಸನಾಲಿಟಿ ಟೆಸ್ಟ್ ಇಂಟರ್‌ವ್ಯೂ: ಪ್ರಿಲಿಮಿನರಿ ಪರೀಕ್ಷೆಯ ಪ್ರಕಟಣೆಯನ್ನು ಫೆಬ್ರುವರಿ 7ರಂದು ಪ್ರಕಟಿಸಲಾಗಿತ್ತು. ಪ್ರಿಲಿಮಿನರಿ ಪರೀಕ್ಷೆಯನ್ನು ಜೂನ್ 3ರಂದು ನಡೆಸಲಾಗುತ್ತದೆ.*
=========
*ಮೈನ್ ಪರೀಕ್ಷೆಯನ್ನು ಸೆಪ್ಟೆಂಬರ್ 28ರಂದು ನಡೆಸುತ್ತಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 6. ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.*
=========
*ನೀವು ಕೊನೆಯ ವರ್ಷದಲ್ಲಿರುವುದರಿಂದ ಮುಂದಿನ ನೋಟಿಫಿಕೇಶನ್‌ ಬಂದ ತಕ್ಷಣ ಹಾಕಿ. ಪರೀಕ್ಷೆಯ ಸೆಂಟರ್‌ಗಳನ್ನು ಆದ್ಯತೆಯ ಪ್ರಕಾರ ಕೊಡುತ್ತಾರೆ.‌*
===========
*ಸಿಟಿಜನ್‌ ಆಫ್ ಇಂಡಿಯಾ, ಪದವೀಧರರು (ಅಂಗೀಕೃತ ಯೂನಿವರ್ಸಿಟಿ), 21 ವರ್ಷ ವಯಸ್ಸು (ಎಸ್‌ಟಿ, ಎಸ್‌ಸಿ, ಓಬಿಸಿಯವರಿಗೆ ರಿಯಾಯಿತಿ ಇದೆ) ಜನರಲ್ ಕ್ಯಾಟಗರಿಯವರು 6 ಸಲ ಈ ಪರೀಕ್ಷೆ ಪಾಸ್ ಮಾಡಲು ಪ್ರಯತ್ನಿಸಬಹುದು.*
==============
*ಓಬಿಸಿಯವರು 9 ಸಲ, ಎಸ್‌ಸಿ, ಎಸ್‌ಟಿಯವರು ಎಷ್ಟು ಸಲ ಬೇಕಾದರೂ ಬರೆಯಬಹುದು. (37 ವರ್ಷದ ತನಕ ಮಾತ್ರ).*
============
*ಈ ಪರೀಕ್ಷೆಯನ್ನು ಗ್ರೂಪ್‌ 'ಎ' ಮತ್ತು ಗ್ರೂಪ್ 'ಬಿ' ಸರ್ವಿಸ್‌ಗಳಿಗೆ ಬರೆಯಬಹುದು. ಗ್ರೂಪ್ 'ಐ'- ಐಎಎಸ್, ಐಪಿಎಸ್, ಐಎಫ್‌ಎಸ್‌ (Indian Forest Service) ಇದು ಮೂರು, ಆಲ್ ಇಂಡಿಯಾ ಸರ್ವಿಸ್‌ ಮತ್ತು ಸೆಂಟ್ರಲ್ ಸರ್ವಿಸ್‌.*
===============
*ಗ್ರೂಪ್ 'ಎ' 1. ಇಂಡಿಯನ್ ಆಡಿಟ್ ಮತ್ತು ಅಕೌಂಟ್ಸ್ ಸರ್ವಿಸ್‌ (IA and AS)*
==============
*2. ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವಿಸ್‌ (ICAS)*
*3. ಇಂಡಿಯನ್ ಕಾರ್ಪೋರೇಟ್‌ 'ಲಾ' ಸರ್ವಿಸ್‌ (ICLS)*
*4. ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ ಸರ್ವಿಸ್‌ (IDAS)*
*5. ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌ (IDEB)*
*6. ಇಂಡಿಯನ್ ಫಾರಿನ್ ಸರ್ವಿಸ್‌ (IFS)]*
*7. ಇಂಡಿಯನ್ ಇನ್ಫರ್ಮೆಶನ್ ಸರ್ವಿಸ್‌ (IIS)*
*8. ಇಂಡಿಯನ್ ಆಡ್ರೆಸ್‌ ಫ್ಯಾಕ್ಟರೀಸ್ ಸರ್ವಿಸ್‌ (IOFS)*
*9. ಇಂಡಿಯನ್ ಪೋಸ್ಟಲ್ ಸರ್ವಿಸ್‌ (IPOS)*
========
*ಇಂಡಿಯನ್ ರೈಲ್ವೇಸ್, ಇಂಡಿಯನ್ ರೆವಿನ್ಯೂ, ಇಂಡಿಯನ್ ಟ್ರೇಡ್ ಸರ್ವಿಸ್‌ - ಈ ರೀತಿ ಹಲವಾರು ವಿಭಾಗಗಳಿವೆ.*
=========
*ಗ್ರೂಪ್ 'ಬಿ' ನಲ್ಲಿ ಆರ್ಮ್ಡ್‌ ಫೋಸರ್ಸ್, ಹೆಡ್ ಕ್ವಾರ್ಟಸ್‌, ಸಿವಿಲ್ ಸರ್ವಿಸ್‌ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ಸಿವಿಲ್ ಸರ್ವಿಸ್‌, ಪಾಂಡಿಚೇರಿ ಪೊಲೀಸ್/ ಸಿವಿಲ್ ಸರ್ವಿಸ್‌.... ಈ ರೀತಿ ಇದೆ.*
===========
*ಪರೀಕ್ಷೆಯ ಸಂಪೂರ್ಣ ವಿವರಕ್ಕೆ www.upsc.gov.in ಪಡೆಯಬಹುದು.*
==============
*ಈ ಪರೀಕ್ಷೆಯ ಸಂಪೂರ್ಣ ವಿವರಗಳನ್ನು ಎಂಪ್ಲಾಯ್‌ಮೆಂಟ್ ನ್ಯೂಸ್‌ನಿಂದಲೂ ಪಡೆಯಬಹುದು. ಇದಕ್ಕೆ ಸಂಬಂಧಿಸಿದ ಪುಸ್ತಕಗಳು ದೊರೆಯುತ್ತವೆ. ಅದನ್ನು ಓದಿ, ಕೋಚಿಂಗ್ ಸೆಂಟರ್‌ಗಳಲ್ಲೂ ತರಬೇತಿ ಪಡೆಯಬಹುದು.
━━━━━━━━━━━━━━━━

*ನೀವು ಕೆ.ಎ.ಎಸ್, ಐ.ಎ.ಎಸ್ ಮಾಡಬೇಕೆ ? ಇಲ್ಲಿದೆ ನೋಡಿ ಸಿದ್ದತೆಯ ಉತ್ತರ…*
================
*ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆ.ಎ.ಎಸ್, ಐ.ಎ.ಎಸ್‌ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು ಕಠಿಣ ಸವಾಲು.ಅದರಲ್ಲೂ ಗ್ರಾಮೀಣ ಪ್ರದೇಶದವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಕಬ್ಬಿಣದ ಕಡಲೆ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತಿರುತ್ತದೆ.ಸ್ವಲ್ಪ ಮಟ್ಟಿಗೆ ಇದು ನಿಜವೂ ಹೌದು. ಹಾಗಂತ ಸುಮ್ಮನೆ ಕೂರದೆ ಅಗತ್ಯಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆ ಬರೆದರೆ ಖಂಡಿತಾ ಯಶಸ್ವಿಯಾಗಬಹುದು. ಬಹಳಷ್ಟು ಮಂದಿ ಯುವಕರು ಕೆ.ಎ.ಎಸ್, ಐ.ಎ.ಎಸ್ ಅಧಿಕಾರಿಗಳಾಗಬೇಕು ಎಂದುಕನಸು ಕಾಣುತ್ತಾರೆ.*
==============≠===
*ಆದರೆ ಆ ಕನಸನ್ನು ನನಸು*ಮಾಡಿಕೊಳ್ಳುವುದು ಹೇಗೆ ಎಂದು ಬಹಳಷ್ಟು ಮಂದಿಗೆ ಗೊತ್ತಿರುವುದಿಲ್ಲ.ಕೆಲವರು ಸುಮ್ಮನೆ ಕನಸು ಕಾಣುವುದರಲ್ಲಿಯೇ ವಯೋಮಿತಿಕಳೆದುಕೊಳ್ಳುತ್ತಾರೆ. ಆದರೆ ಯಶಸ್ವಿಯಾಗಿರುವುದಿಲ್ಲ.ಇದಕ್ಕೆ ಮುಖ್ಯ ಕಾರಣ ಕಠಿಣ ಪರಿಶ್ರಮ, ಸಾಕಷ್ಟು ಪೂರ್ವ ಸಿದ್ಧತೆಯೊಂದಿಗೆ ಪರೀಕ್ಷೆ ಬರೆಯದೆ ಇರುವುದು.*
*1998ರಿಂದ ಈಚೆಗೆ ಐ.ಎ.ಎಸ್ ಮಾದರಿಯಲ್ಲಿಯೇ ಮೂರು ಹಂತಗಳಲ್ಲಿ ಕೆ.ಎ.ಎಸ್ ಪರೀಕ್ಷೆ ನಡೆಯುತ್ತಿದ್ದು, ಅದರಲ್ಲೂ ಈ ಬಾರಿ ಸಣ್ಣಪುಟ್ಟ ಬದಲಾವಣೆಗಳನ್ನುಮಾಡಿ ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳಲು ಇರುವ ಮಾನದಂಡಗಳನ್ನೇ ಕೆ.ಎ.ಎಸ್ ಪರೀಕ್ಷೆಗೂ ನಿಗದಿಪಡಿಸಲಾಗಿದೆ.*
================
*ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ*
====
*ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತುವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು.*
================
*ವಯೋಮಿತಿ: ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ ಗರಿಷ್ಠ ವಯೋಮಿತಿಯನ್ನುನಿಗದಿಪಡಿಸಲಾಗಿದೆ.*.
===============
*ಮುಖ್ಯವಾಗಿ ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ*
> *1. ಪೂರ್ವಭಾವಿ ಪರೀಕ್ಷೆ*  > *2. ಮುಖ್ಯ ಪರೀಕ್ಷೆ*  
> *3. ಸಂದರ್ಶನ.*
===============
*ಪೂರ್ವಭಾವಿ ಪರೀಕ್ಷೆ*
•••••••••••••
*>ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ*
> *ಎರಡನೆಯದು  ಕೂಡ 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ (CSAT).*
============
*ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.*
===============
*ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು ಉತ್ತರಗಳ ಪೈಕಿ ಸರಿಯಾದ ಉತ್ತರವನ್ನುಗುರುತಿಸಬೇಕಾಗುತ್ತದೆ. 2014 ರಿಂದ ಪೂರ್ವಭಾವಿ ಪರೀಕ್ಷೆ ಯಲ್ಲಿ ನಕಾರಾತ್ಮಕ ಅಂಕಗಳನ್ನುನಿಗದಿ ಪಡಿಸಲಾಗಿದೆ.*
=================
> *ಪತ್ರಿಕೆ 1: ಸಾಮಾನ್ಯ ಅಧ್ಯಯನಇದು ಸಾಮಾನ್ಯ ವಿಜ್ಞಾನ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಪ್ರಚಲಿತ ವಿದ್ಯಮಾನಗಳು, ಭಾರತದ ಚರಿತ್ರೆ,*
> *ಭೂಗೋಳ, ಸಂವಿಧಾನ, ಆರ್ಥಿಕತೆ, ಭಾರತದ ರಾಷ್ಟ್ರೀಯ ಚಳವಳಿ, ಮನೋಸಾಮರ್ಥ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಕನ್ನಡ ಮತ್ತುಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. ಅಭ್ಯರ್ಥಿಗಳು ಯಾವುದಾದರೂ ಒಂದು ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ*
===============
*ಪತ್ರಿಕೆ 2: ಸಾಮಾನ್ಯ ಅಧ್ಯಯನ (CSAT)*
> *ರಾಜ್ಯದ ಪ್ರಚಲಿತ ವಿದ್ಯಮಾನಗಳು*
> *ಸಾಮಾನ್ಯ ವಿಜ್ಞಾನ & ತಂತ್ರ ಜ್ಞಾನ*
> *ಮಾನಸಿಕ  ಮಾನಸಿಕ ಸಾಮರ್ಥ್ಯ ಪರೀಕ್ಷೆ ( S S L C Level )*
> *ಈ ಪೂರ್ವಭಾವಿ ಪರೀಕ್ಷೆಯ ನಂತರ 1:20ರ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಆಗ ಮತ್ತೊಮ್ಮೆಅರ್ಜಿ ಸಲ್ಲಿಸಬೇಕು. ಮುಖ್ಯಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಪದವಿಯ ಅಂಕಪಟ್ಟಿಗಳನ್ನು ಹೊಂದಿರಬೇಕಾಗಿರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಒಂದು ವೇಳೆ ಪದವಿಯಅಂತಿಮ ಸೆಮಿಸ್ಟರ್‌ನಲ್ಲಿ ಉತ್ತೀರ್ಣರಾಗಲು ವಿಫಲರಾದರೆ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು ಅನರ್ಹರಾಗುತ್ತಾರೆ.*
==================
*ಮುಖ್ಯ ಪರೀಕ್ಷೆ*
•••••••••••••••••
> *ಇದರಲ್ಲಿ ಒಟ್ಟು ಎಂಟು ಪ್ರಶ್ನೆ ಪತ್ರಿಕೆಗಳು ಇರುತ್ತವೆ.*
> *ಪತ್ರಿಕೆ 1- ಕನ್ನಡ  & ಪ್ರಬಂಧ (100 ಅಂಕ)*
> *ಪತ್ರಿಕೆ 2- ಇಂಗ್ಲಿಷ್ (100 ಅಂಕ)*
> *ಪತ್ರಿಕೆ  3, 4,  5, & 6: ಸಾಮಾನ್ಯ ಅಧ್ಯಯನ, ತಲಾ 250 ಅಂಕಗಳು.*
> *ಪತ್ರಿಕೆ 7,8: ಒಂದು ಐಚ್ಛಿಕ ವಿಷಯದಲ್ಲಿ ಎರಡು ಪತ್ರಿಕೆಗಳು (ತಲಾ 250 ಅಂಕಗಳು)*
> *ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೇ 35ರಷ್ಟು ಅಂಕಗಳನ್ನು ಗಳಿಸಲೇಬೇಕು. ಒಂದು ವೇಳೆ ನಿಗದಿತ ಅಂಕಗಳನ್ನು ಗಳಿಸದಿದ್ದರೆ ಉಳಿದ ಪತ್ರಿಕೆಗಳ ಮೌಲ್ಯಮಾಪನಮಾಡುವುದಿಲ್ಲ. ಆದರೆ ಈ ಅಂಕಗಳನ್ನು ಅಭ್ಯರ್ಥಿಗಳ ಶ್ರೇಯಾಂಕ ನಿಗದಿಗೆ ಪರಿಗಣಿಸುವುದಿಲ್ಲ.*
> *ಇಲ್ಲಿಯೂ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಇರುತ್ತದೆ.ವಿವರಣಾತ್ಮಕ ರೂಪದ ಪ್ರಶ್ನೆಗಳು ಇರುತ್ತವೆ.*
==================
*ಕನ್ನಡ, ಇಂಗ್ಲಿಷ್ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿರುತ್ತದೆ. ಮುಖ್ಯ ಪರೀಕ್ಷೆಯ ಪಠ್ಯಕ್ರಮ ಪದವಿ ಮಟ್ಟದ್ದಾಗಿರುತ್ತದೆ.*
================
*ಸಂದರ್ಶನ:  ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಒಟ್ಟು ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ 1:3ರ ಅನುಪಾತದಲ್ಲಿ ಸಂದರ್ಶನಕ್ಕೆಆಹ್ವಾನಿಸಲಾಗುತ್ತದೆ. ಇಲ್ಲಿ ಅಭ್ಯರ್ಥಿಯ ನಾಯಕತ್ವ ಗುಣ, ಮಾನಸಿಕ ಸಮತೋಲನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇತ್ಯಾದಿ.
━━━━━━━━━━━━

Post a Comment

0 Comments