ಕ್ಲಾಸ್ ಟಾಪರ್ಸ್ ಬಿಚ್ಚಿಡದ ಓದಿನ ಗುಟ್ಟು ನಿಮಗೇನಾದ್ರೂ ಗೊತ್ತಾ?

ಕ್ಲಾಸ್ ಟಾಪರ್ಸ್ ಬಿಚ್ಚಿಡದ ಓದಿನ ಗುಟ್ಟು ನಿಮಗೇನಾದ್ರೂ ಗೊತ್ತಾ?

ನಾನಿನ್ನೂ ಪುಸ್ತಕಾನೇ ತೆರೆದಿಲ್ಲ. ಪರೀಕ್ಷೆಗೆ ಕೆಲವೇ ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದೇನೆ ಎನ್ನುವವರೇ ಎಲ್ಲರಿಗಿಂತಲೂ ಅಧಿಕ ಅಂಕ ಗಳಿಸೋದನ್ನು ,ರ್ಯಾಂಕ್ ಗಳಿಸೋದನ್ನು ನೀವು ನೋಡಿರುವಿರಿ. ಪ್ರತಿಯೊಬ್ಬರ ಕ್ಲಾಸ್‌ನಲ್ಲೂ ಇಂತಹ ಕ್ಲಾಸ್‌ಮೇಟ್‌ಗಳೂ ಇದ್ದೇ ಇರುತ್ತಾರೆ. ನಾವಿಲ್ಲಿ ಮಾತಾಡುತ್ತಿರುವುದು ಕ್ಲಾಸ್ ಟಾಪರ್ಸ್ ಬಗ್ಗೆ.

ಎಲ್ಲಾ ಓದಿಲ್ಲ ಅಂದ್ರೂ ಅದ್ಹೇಗೆ ಹೆಚ್ಚು ಅಂಕ ಗಳಿಸುತ್ತಾರೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಈ ಬಗ್ಗೆ ಅವರಲ್ಲಿ ಕೇಳಿದರೆ ಅವರು ಖಂಡಿತವಾಗಿಯೂ ತಮ್ಮ ಸಿಕ್ರೆಟ್‌ನ್ನು ಬಿಚ್ಚಿಡುವುದಿಲ್ಲ. ಯಾಕೆಂದರೆ ಯಾರೂ ಹೆಚ್ಚಿನ ಸ್ಪರ್ಧೇಯನ್ನು ಬಯಸುವುದಿಲ್ಲ. ಇಲ್ಲಿ ನಾವು ಈ ಟಾಪರ್ಸ್ ಯಾವ ರೀತಿ ಅಧ್ಯಯನ ಮಾಡುತ್ತಾರೆ ಎನ್ನುವುದನ್ನು ಇಲ್ಲಿ ನೀಡಿದ್ದೇವೆ.

1. ವಿಷ್ಯಗಳನ್ನು ವಿಭಾಗಗಳಾಗಿ ವಿಂಗಡಿಸಿ
ಎಲ್ಲಾ ವಿಷ್ಯಗಳನ್ನು ಒಂದೇ ಸಮನೆ ಓದುತ್ತಾ ಹೋಗುವ ಬದಲು ಅದನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ. ಹಾಗಾಗಿ ನೀವು ನಿಮ್ಮ ಗಮನವನ್ನು ಒಂದೇ ಭಾಗದ ಮೇಲೆ ಹರಿಸಬಹುದು. ಒಂದೊಂದು ವಿಷ್ಯದ ಅಧ್ಯಯನ ಅವಧಿಯು ಕೇವಲ ೫೦ ನಿಮಿಷವಾಗಿರಬೇಕು. ಈ ೫೦ ನಿಮಿಷದಲ್ಲಿ ಕೇವಲ ನಿಮ್ಮ ಓದಿನ ಕಡೆಯೇ ಗಮನ ಇರಬೇಕೆ ಹೊರತು ಬೇರೆ ಎಲ್ಲೂ ಇರಬಾರದು. ಗಂಟೆಗಟ್ಟಲೇ ಓದುವುದರಿಂದ ೫೦ ನಿಮಿಷ ಸರಾಗವಾಗಿ ಓದುವುವುದು ಹೆಚ್ಚು ಉಪಯುಕ್ತವಾಗಿದೆ.

2. ನಿಮ್ಮನ್ನು ವಿಚಲಿತಗೊಳಿಸುವ ವಸ್ತುಗಳನ್ನು ಬರೆದಿಟ್ಟುಕೊಳ್ಳಿ
ಇದು ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು. ಸಾಮಾನ್ಯವಾಗಿ ಯಾವುದಾದರೂ ಒಂದು ಕೆಲಸ ಮಾಡುವಾಗ ಹಲವಾರು ಅಡೆತಡೆಗಳು ಇದ್ದೇ ಇರುತ್ತದೆ. ಓದುವಾಗಲೂ ಕೆಲವು ವಸ್ತುಗಳು ನಿಮ್ಮ ಮನಸ್ಸನ್ನು ವಿಚಲೀತಗೊಳಿಸಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಆಗೋದಿಲ್ಲ. ಅದಕ್ಕಾಗಿ ಬೇರೆಯವರನ್ನು ದೂರಿ ಪ್ರಯೋಜನವಿಲ್ಲ. ಫೋನ್, ವಾಟ್ಸ್‌ಆಪ್, ಫೇಸ್‌ಬುಕ್ ಇವೆಲ್ಲಾ ನಿಮ್ಮ ಕೆಲಸ ಬಾಕಿ ಉಳಿಯಲು ಕಾರಣಗಳಾಗಿವೆ.

3. ಪ್ರತಿಬಾರಿ ಓದುವಾಗ ಈ ಮೂರು ನಿಯಮವನ್ನು ಪಾಲಿಸಿ
ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಓದುವ ಅಭ್ಯಾಸ ಇರುತ್ತದೆ. ಕೆಲವರು ಏಕಾಂತವಾಗಿ ಓದಿದ್ರೆ ಇನ್ನೂ ಕೆಲವರು ಗ್ರೂಪ್ ಅಧ್ಯಯನ ಮಾಡುತ್ತಾರೆ. ಯಾವ ರೀತಿ ನೀವು ಪರೀಕ್ಷೆ ತಯಾರಿ ನಡೆಸಿದ್ದೀರಿ ಎನ್ನುವುದು ಪರೀಕ್ಷೆಯ ದಿನ ತಿಳಿಯುತ್ತದೆ. ಈ ಮೂರು ವಿಧಾನಗಳ ಮೂಲಕ ಓದಿದ್ರೆ ಪರೀಕ್ಷೆಯಲ್ಲಿ ಚೆನ್ನಾಗಿ ಮಾರ್ಕ್ ಪಡೆಯಬಹುದು.
a)ಪ್ಲಾನಿಂಗ್: ಹಿಂದಿನ ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ನೋಡಿ, ಅದರಲ್ಲಿ ಯಾವ ಪ್ರಶ್ನೆಪತ್ರಿಕೆಯನ್ನು ನೀವು ಸರಿಯಾಗಿ ಉತ್ತರಿಸಬಹುದು ಎನ್ನುವುದನ್ನು ನೋಡಿ...ಪ್ರತಿಯೊಂದು ಪ್ರಶ್ನೆಗೆ ಇಂತಿಷ್ಟು ಸಮಯವನ್ನು ನಿಗಧಿಗೊಳಿಸಿ. ಕೊನೆಗೆ ಸ್ವಲ್ಪ ಸಮಯವನ್ನು ಇಟ್ಟುಬಿಡಿ. ಕೇವಲ ಪ್ರಶ್ನೆಪತ್ರಿಕೆಯನ್ನು ನೋಢುವುದಕ್ಕಿಂತಲೂ ಹಂತ ಹಂತವಾಗಿ ಬಗೆಹರಿಸುತ್ತಾ ಬರಬಹುದು.
b)ಮುಂದುವರೆಸುತ್ತಾ ಹೋಗಿ: ಒಮ್ಮೆ ನೀವು ಪ್ರಶ್ನೆಗಳಿಗೆ ಉತ್ತರ ಬರೆಯುವುದೆಂದು ನಿರ್ಧರಿಸಿದ ನಂತರ ಮೊದಲಿಗೆ ಸುಲಭದ ಪ್ರಶ್ನೆಗಳನ್ನು ಉತ್ತರಿಸಿ. ಇದರಿಂದ ನಿಮ್ಮ ಸಮಯ ಕೂಡ ಉಳಿತಾಯವಾಗುತ್ತದೆ. ಒಮ್ಮೆ ನಿಮಗೆ ತಿಳಿದಿರುವ ಸುಲಭದ ಪ್ರಶ್ನೆಗಳನ್ನೆಲ್ಲ ಉತ್ತರಿಸಿದ ನಂತರ ಕಠಿಣ ಪ್ರಶ್ನೆಗಳನ್ನು ಉತ್ತರಿಸಿ. ಉಳಿದ ಸಮಯವನ್ನು ಕಠಿಣ ಪ್ರಶ್ನೆಗಳಿಗಾಗಿ ಮೀಸಲಿಡಿ.
c)ಪ್ರೂಫ್ ರೀಡಿಂಗ್: ಇಡೀ ಪ್ರಶ್ನಾಪತ್ರಿಕೆಯನ್ನು ಉತ್ತರಿಸಿದ್ದೀರಿ ಎಂದಾದ ನಂತರ ಉಳಿದಿರುವ ಸಮಯವನ್ನು ಪ್ರೂಫ್ ರೀಡಿಂಗ್‌ಗೆ ಬಳಸಿ. ಬರೆದಿರುವ ಉತ್ತರಗಳೆಲ್ಲಾ ಸರಿಯಾಗಿದೆಯೋ?, ಏನಾದರೂ ಸ್ಪೆಲ್ಲಿಂಗ್ ಮಿಸ್ಟೆಕ್ ಇದೆಯಾ ಅಥವಾ ಸೀರಿಯಲ್ ನಂಬರ್ ಸರಿಯಾಗಿ ಹಾಕಿದ್ದೀರಾ ಎನ್ನುವುದನ್ನು ಪರೀಕ್ಷಿಸಿ. ಒಮ್ಮೆ ಬರೆದಿರುವುದರ ಮೇಲೆ ಕಣ್ಣಾಡಿಸಿ.

Post a Comment

0 Comments