ಉದ್ಯೋಗ ಮೇಳಕ್ಕೆ ಹೋಗುವ ಮೊದಲು ಇದನ್ನು ಗಮದಲ್ಲಿಡಿ

ಉದ್ಯೋಗ ಮೇಳಕ್ಕೆ ಹೋಗುವ ಮೊದಲು ಇದನ್ನು ಗಮದಲ್ಲಿಡಿ

ಕಾರ್ಪೋರೇಟ್ ಕಂಪನಿಗಳಲ್ಲಿ ಜಾಬ್ ಇಂಟರ್ವ್ಯೂ ಆಯ್ಕೆ ಬಹಳ ಕಡಿಮೆ ಇರುತ್ತದೆ. ಅದೇ ಉದ್ಯೋಗ ಮೇಳದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿರುತ್ತವೆ. ಕಾರ್ಪೋರೇಟ್ ಕಂಪನಿಗಳು ಬಹಳಷ್ಟು ಉದ್ಯೋಗಾವಕಾಶವನನ್ನು ಒದಗಿಸುತ್ತವೆ. ಈ ಮೂಲಕ ನಿಮಗೆ ಬೇಕಾದಂತಹ ಉದ್ಯೋಗವನ್ನು ಆರಾಮದಲ್ಲಿ ಪಡೆಯಬಹುದು.

ಉದ್ಯೋಗ ಮೇಳದಲ್ಲಿ ಯಾವುದಾದರೂ ಕಂಪನಿ ನಿಮ್ಮನ್ನು ಆಯ್ಕೆ ಮಾಡಬಹುದು. ನಿಮಗೆ ಇಲ್ಲಿ ಕೆಲವು ಟಿಪ್ಸ್‌ನ್ನು ನೀಡಲಾಗಿದೆ.

1.ಪ್ಲ್ಯಾನ್ ಮಾಡಿ:
ಒಂದು ವೇಳೆ ಕೆಲಸ ಹುಡುಕುತ್ತಿದ್ದಿರೆಂದಾದರೆ ಉದ್ಯೋಗ ಮೇಳ ಸೂಕ್ತವಾದ ವೇದಿಕೆಯಾಗಿದೆ. ಇಲ್ಲಿ ಸಾಕಷ್ಟು ಅವಕಾಶಗಳು ಇರುತ್ತವೆ. ಇತರ ಉದ್ಯೋಗದ ಸಂದರ್ಶನದಂತೆ ಇದೂ ಕೂಡಾ ಇರುತ್ತದೆ. ಸಾಮಾನ್ಯವಾಗಿ ಉದ್ಯೋಗ ಮೇಳಕ್ಕೆ ಹೋಗುವಾಗ ನೀವು

  

2. ಕಂಪನಿ, ಕೆಲಸದ ಬಗ್ಗೆ ತಿಳಿಯಿರಿ.
ನಿಮ್ಮ ಆದ್ಯತೆಗನುಗುಣವಾಗಿ ಕಂಪನಿಯ ಆಯ್ಕೆ ಮಾಡಿ. ಇದು ನಿಮ್ಮ ಮುಂದಿನ ಭವಿಷ್ಯದ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿದೆ.

  

3. ಫಾರ್ಮಲ್ ಡ್ರಸ್:
ಉದ್ಯೋಗ ಮೇಳದಲ್ಲಿನ ಸಂದರ್ಶನವು ನಾರ್ಮಲ್ ಸಂದರ್ಶನಕ್ಕಿಂತ ಭಿನ್ನವಾಗಿದೆ ಎಂದು ತಿಳಿಯಬೇಡಿ. ಇತರ ಸಂದರ್ಶನದಲ್ಲೇ ನೀವು ಯಾವ ರೀತಿ ಪಾಲ್ಗೊಳ್ಳುತ್ತೀರೋ ಅದೇ ರೀತಿ ಉದ್ಯೋಗ ಮೇಳದಲ್ಲಿನ ಸಂದರ್ಶನದಲ್ಲೂ ಪಾಲ್ಗೊಳ್ಳ ಬೇಕು. ನಿಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಅವರು ನಿಮ್ಮನ್ನು ರಿಜೆಕ್ಟ್ ಮಾಡಬಹುದು. ಹಾಗಾಗಿ ಸಂದರ್ಶನಕ್ಕೆ ಹೋಗುವಾಗ ಫಾರ್ಮಲ್ ಡ್ರೆಸ್‌ನ್ನೇ ಹಾಕಿ.
  

4. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿ ಬಗ್ಗೆ ತಿಳಿಯಿರಿ
ಉದ್ಯೋಗ ಮೇಳದಲ್ಲಿ ಸಾಕಷ್ಟು ಕಂಪನಿಗಳು ಬರುತ್ತವೆ. ಹಾಗಾಗಿ ಯಾವ ಕಂಪನಿಗೆ ಅಪ್ಲೈ ಮಾಡಬೇಕೆಂದು ನಿಮಗೆ ಕನ್‌ಫ್ಯೂಜ್ ಆಗಬಹುದು. ಅದಕ್ಕಾಗಿ ನೀವು ಮೊದಲು ಉದ್ಯೋಗ ಮೇಳದಲ್ಲಿ ಯಾವೆಲ್ಲಾ ಕಂಪನಿಗಳು ಭಾಗವಹಿಸಿದೆ ಎನ್ನುವುದನ್ನು ತಿಳಿಯಿರಿ. ನಿಮಗೆ ಯಾವ ಕೆರಿಯರ್ ಸೂಟ್ ಆಗುತ್ತದೆ ಎನ್ನುವುದನ್ನು ಅರಿಯಿರಿ ನಂತರ ಸಂದರ್ಶನದಲ್ಲಿ ಪಾಲ್ಗೊಳ್ಳಿ.
  

5. ಸರಿಯಾಗಿ ಉತ್ತರಿಸಿ:
ಇತರ ಸಂದರ್ಶನದಂತೆ ಉದ್ಯೋಗ ಮೇಳದ ಸಂದರ್ಶನದಲ್ಲೂ ಸಂದರ್ಶಕರು ಕೇಳಿದ ಪ್ರಶ್ನೆಗೆ ಸರಿಯಾ ಉತ್ತರಿಸಿ. ಕಂಪನಿ ಬಗ್ಗೆ ಚರ್ಚೆ ನಡೆಸಿ . ಒಂದು ವೇಳೆ ನೀವು ಸಂದರ್ಶಕರನ್ನು ಇಂಪ್ರೆಸ್ ಮಾಡುವಲ್ಲಿ ವಿಫಲರಾದರೆ. ಉದ್ಯೋಗವನ್ನು ಕಳೆದುಕೊಳ್ಳುವಿರಿ.
  

6. ಉತ್ಸಾಹದಿಂದಿರಿ:
ಯಾರು ಉತ್ಸಾಹದಿಂದಿರುತ್ತರೋ, ಚುರುಕಾಗಿರುತ್ತಾರೋ ಅಂತಹ ವ್ಯಕ್ತಿಗಳನ್ನು ಕಾರ್ಪೋರೇಟ್ ಕಂಪನಿಗಳು ಆಯ್ಕೆ ಮಾಡುತ್ತವೆ. ವ್ಯಕ್ತಿಯು ಚಾಲೆಂಜ್‌ನ್ನು ಸ್ವೀಕರಿಸಲು ಅರ್ಹನಾಗಿದ್ದಾನಾ ಎನ್ನುವುದನ್ನು ತಿಳಿಯುತ್ತಾರೆ,. ನಿಮ್ಮ ನಡವಳಿಕೆಯಲ್ಲಿ ಏನಾದರೂ ವ್ಯತ್ಯಾಸ ಕಾಣಿಸಿಕೊಂಡರೆ ನಿಮ್ಮನ್ನು ರಿಜೆಕ್ಟ್ ಮಾಡಕೂ ಬಹುದು.

Post a Comment

0 Comments