ತರಬೇತಿ ಕಾರ್ಯಾಗಾರದಲ್ಲಿ ಒಂದು ದಿನ.

ತರಬೇತಿ ಕಾರ್ಯಾಗಾರವೊಂದು ನಡೆಯುತ್ತಿತ್ತು
    _```200ಕ್ಕೂ ಹೆಚ್ಚು ಜನರು ಅಲ್ಲಿ ಸೇರಿದ್ದರು. ಮಾತಿಗೆ ನಿಂತ ಪ್ರೊಫೆಸರ್ ತಮ್ಮ ಜೇಬಿನಿಂದ 100 ಒಂದು ನೋಟನ್ನು ತೆಗೆದು ಎತ್ತಿ ಹಿಡಿದು ‘ನಾನೀಗ ಈ ನೋಟನ್ನು ಕೊಡುತ್ತೇನೆ ಎಂದಾದರೆ ಯಾರ್ಯಾರಿಗೆ ಈ ದುಡ್ಡು ಬೇಕು?’ ಎಂದು ಕೇಳಿದರು.```_

ಅಲ್ಲಿದ್ದ ಅಷ್ಟೂ ಮಂದಿ ಕೈ ಎತ್ತಿದರು.
‘ಸರಿ ಹಾಗಾದರೆ ಒಂದು ನಿಮಿಷ ತಡೆಯಿರಿ’ ಎಂದು ಪ್ರೊಫೆಸರ್ ನೋಟನ್ನು ಎರಡು ಬಾರಿ ಮಡಚಿದರು.
‘ಈಗ ಈ ನೋಟು ಯಾರಿಗೆ ಬೇಕು?’ಎಂದರು. ಮತ್ತೆ ಎಲ್ಲರೂ ಕೈ ಎತ್ತಿದರು.
ಪ್ರೊಫೆಸರ್ ನೋಟನ್ನು ಕೈಯಲ್ಲಿ ಮುದ್ದೆ ಮಾಡಿದರು.
‘ಈಗ’. ಆಗಲೂ ಯಾರೂ ಕೈ ಕೆಳಗಿಳಿಸಲಿಲ್ಲ.
ಕೊನೆಗೆ, ಪ್ರೊಫೆಸರ್ ನೋಟನ್ನು ಕೆಳಕ್ಕೆ ಹಾಕಿ ತಮ್ಮ ಬೂಟುಕಾಲಿನಿಂದ ತುಳಿದರು.
ಧೂಳು ಹಿಡಿದಿದ್ದ ನೋಟನ್ನು ಮೇಲೆ ಎತ್ತಿ ಹಿಡಿದು ‘ಈಗಲೂ ಈ ನೋಟು ಬೇಕೆ?’ ಎಂದರು. ಎಲ್ಲರೂ ಹೌದೆಂದರು.

‘ನಾನೀಗ ನಿಮಗೆ ಜೀವನದ ದೊಡ್ಡ ಪಾಠವನ್ನು ಹೇಳಿ ಕೊಟ್ಟಿದ್ದೇನೆ. ನೀವು ನೋಟನ್ನು ಮಡಚಿದರೂ, ಮುದ್ದೆ ಮಾಡಿದರೂ, ಧೂಳಿನಲ್ಲಿ ಹಾಕಿ ತುಳಿದರೂ ಅದರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ನೋಟಿಗಿರುವ ಮೌಲ್ಯ ಮೊದಲೂ 100 ರು. ಇತ್ತು, ಈಗಲೂ ಅಷ್ಟೇ ಇದೆ. ಜೀವನವೂ ಹಾಗೆಯೇ ಈ ನೋಟಿನಂತೆ. ಕಷ್ಟಗಳು ನಮ್ಮನ್ನು ಮುದ್ದೆ ಮಾಡುತ್ತವೆ, ತುಳಿಯುತ್ತವೆ, ಕೆಲವೊಮ್ಮೆ ಹೊಸಕಿಯೇ ಹಾಕಿ ಬಿಡುತ್ತವೆ. ಹಾಗಾದಾಗ ನಾವು ಕುಸಿದು ಬಿಡುತ್ತೇವೆ. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾನು ಅಪ್ರಯೋಜಕ ಎಂಬ ಭಾವನೆ ಮೂಡಿ ಬಿಡುತ್ತದೆ. ಆದರೆ ನೆನಪಿರಲಿ, ನಮ್ಮ ಜೀವನದ ಮೌಲ್ಯ ಕುಂದಿರುವುದಿಲ್ಲ.
You will never lose your value. Because you are special’.

    *ಈ ಮಾತನ್ನು ಎಂದೆದಿಗೂ ಮರೆಯಬೇಡಿ.*

Post a Comment

0 Comments