ಸಾಧ್ಯವಾದರೆ ಓಡು

*ಸಾಧ್ಯವಾದರೆ ಓಡು*
*ಆಗಲಿಲ್ಲವಾದರೆ ನಡೆ*
*ಅದೂ ಸಾಧ್ಯವಾಗದಿರೆ*
*ಉರುಳಿ ಕೊಂಡು ಹೋಗು ಅಷ್ಟೇ!*

*ಆದರೆ ಕದಲದೇ*
*ಬಿದ್ದಿರಬೇಡ ಒಂದೇ ಕಡೆ*

*ಕೆಲಸ ಸಿಗಲಿಲ್ಲವೆಂದು,*
*ವ್ಯಾಪಾರ ನಷ್ಟವಾಯಿತೆಂದು*
*ಗೆಳೆಯನೊಬ್ಬ ಮೋಸಮಾಡಿದನೆಂದು,*
*ಪ್ರೀತಿಸಿದವಳು*
*ಕೈಬಿಟ್ಟಳೆಂದು!!*

*ಹಾಗೆ ಇದ್ದರೆ ಹೇಗೆ..?*
*ದಾಹಕ್ಕೆ ಬಾರದ*
*ಸಮುದ್ರದ ಅಲೆಗಳು ಕೂಡಾ*
*ಕುಣಿದು ಕುಪ್ಪಳಿಸುತ್ತವೆ ನೋಡು!*

*ಮನಸು ಮಾಡಿದರೇ...*
*ನಿನ್ನ ಹಣೆಬರಹ ಇಷ್ಟೇ*
*ಅಂದವರೂ ಸಹ...*
*ನಿನ್ನ ಮುಂದೆ ತಲೆ ತಗ್ಗಿಸುವ*
*ತಾಕತ್ತು ನಿನ್ನಲ್ಲಿದೆ*

*ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?*

*ಸೃಷ್ಟಿ ಚಲನಶೀಲ*
*ಯಾವುದೂ ನಿಲ್ಲಬಾರದು*

*ಹರಿಯುವ ನದಿ*
*ಬೀಸುವ ಗಾಳಿ*
*ತೂಗುವ ಮರ*
*ಹುಟ್ಟೋ ಸೂರ್ಯ*
*ಅಂದುಕೊಂಡಿದ್ದನ್ನು ಸಾಧಿಸಬೇಕೆಂದು*
*ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ*

*ಯಾವುದೂ  ನಿಲ್ಲಬಾರದು.*
*ಏಳು... ಎದ್ದೇಳು*
*ಹೊರಡು...*
*ನಿನ್ನನ್ನು ಅಲಗಾಡದಂತೆ*
*ಮಾಡಿದ ಆ ಮಾನಸಿಕ*
*ಸಂಕೋಲೆಗಳನ್ನು ಬೇಧಿಸು*
*ಬಿದ್ದ ಜಾಗದಿಂದಲೇ*
*ಓಟ ಶುರು ಮಾಡು*

*ನೀನು ಮಲಗಿದ ಹಾಸಿಗೆ*
*ನಿನ್ನನ್ನು ಅಸಹ್ಯ ಪಡುವ ಮುನ್ನ*
*ಅಲಸ್ಯವನ್ನು ಬಿಡು*

*ಕನ್ನಡಿ ನಿನ್ನನ್ನು ಪ್ರಶ್ನಿಸುವ*
*ಮುನ್ನ ಉತ್ತರ ಹುಡುಕು*

*ನೆರಳು ನಿನ್ನನ್ನು ಬಿಡುವ*
*ಮುನ್ನ ಬೆಳಕಿಗೆ ಬಾ*

*ಮತ್ತೆ ಹೇಳುತ್ತಿದ್ದೇನೆ...*
*ಕಣ್ಣೀರು ಸುರಿಸುವುದರಿಂದ*
*ಅದು ಸಾಧ್ಯವಿಲ್ಲ!*
*ಬೆವರು ಸುರಿಸುವುದರಿಂದ*
*ಮಾತ್ರ ಚರಿತ್ರೆ*
*ಸೃಷ್ಟಿಸಬಹುದೆಂದು*
*ತಿಳಿದುಕೋ...*

*ಓದಿದರೆ ಇವು ಪದಗಳಷ್ಟೇ...*
*ಆದರೆ ಆಚರಿಸಿದಾಗ*
*ಅಸ್ತ್ರಗಳು..!!!!!*
*ಮಹಾ ಶಸ್ತ್ರಗಳು!!!!!!!*

*ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ..*
*ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...*
*ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...*
                  *ಆದರೆ*
*"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ"*
                *ಎಚ್ಚರ*🀄
*"ಗೆದ್ದರೆ ಕಾಲು ಹಿಡಿಯುತ್ತಾರೆ, ಬಿದ್ದರೆ ಕಾಲು ಎಳೆಯುತ್ತಾರೆ"*

Post a Comment

1 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)